ಒಡಹುಟ್ಟಿದ ಅಣ್ಣನನ್ನು ಹತ್ಯೆಮಾಡಿ ಮೃತದೇಹವನ್ನ ಶೌಚಾಲಯದ ಗುಂಡಿಯಲ್ಲಿ ಬಚ್ಚಿಟ್ಟ ತಮ್ಮ ಮೂರುದಿನಗಳ ನಂತರ ಪ್ರಕರಣ ಬೆಳಕಿಗೆ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಬೆನವಾರ ಗ್ರಾಮದಲ್ಲಿ ಒಡಹುಟ್ಟಿದ ತಮ್ಮನೆ ಅಣ್ಣನನ್ನು ಕೊಲೆ ಮಾಡಿ ಶೌಚಾಲಯದ ಪಿಟ್ ಗುಂಡಿಯಲ್ಲಿ ಶವವನ್ನು ಹೂತಿಟ್ಟ ಘಟನೆ ನಡೆದಿದೆ ವರದರಾಜು ಅಲಿಯಾಸ್ ಬಾಂಬೆ ರಾಜಣ್ಣ (70) ತಮ್ಮನಿಂದಲೆ ಕೊಲೆಯಾದ ವ್ಯಕ್ತಿ ತಮ್ಮ ರಾಮದಾಸ್ (68) ನಿಂದ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ ಕುಣಿಗಲ್ ತಾಲ್ಲೂಕಿನ ಅಮೃತೂರು ಹೊಬಳಿ ವ್ಯಾಪ್ತಿಯ ಬೆನವಾರ ಗ್ರಾಮದ ಒಂದೆ ಮನೆಯಲ್ಲೆ ತಮ್ಮನೊಂದಿಗೆ ವಾಸವಿದ್ದ ವರದರಾಜು ಅಲಿಯಾಸ್ ಬಾಂಬೆ ರಾಜಣ್ಣ ಈ ಹಿಂದೆ ಬಾಂಬೆ ಹಾಗೂ ಬೆಂಗಳೂರಿನಲ್ಲಿ ವಾಸವಾಗಿದ್ದರು.ಬಳಿಕ ಸ್ವಗ್ರಾಮಕ್ಕೆ ಬಂದಿದ್ದ ಬಳಿಕ ಹುಲಿಯೂರುದುರ್ಗದ ಬಾರ್ನಲ್ಲಿ ಕೆಲಸ ಮಾಡುತ್ತಿದ್ದಾಗ ಬಿದ್ದು ಕಾಲು ಮುರಿದುಕೊಂಡಿದ್ದರು. ಕಳೆದ ಎರಡು ತಿಂಗಳಿಂದ ತಮ್ಮ ರಾಮದಾಸ್ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದರು.ವಯೋ ವೃದ್ದ ಆದ ಕಾರಣ ಕಾಲು ಕೈ ಸ್ವಾಧೀನ ಇಲ್ಲದೆ ಮಲ ಮೂತ್ರ ಒಂದೆ ಕಡೆಯಲ್ಲಿ ಮಾಡುತ್ತಿದ್ದ ಎಂಬ ಕಾರಣಕ್ಕೆ ರಾಮದಾಸ ಕುಡಿದ ಮತ್ತಿನಲ್ಲಿ ಅಣ್ಣ ವರದರಾಜು ನನ್ನು ಹತ್ಯೆ ಮಾಡಿ ಮನೆಯ ಪಕ್ಕದ ಶೌಚಾಲಯದ ಪಿಟ್ ನಲ್ಲಿ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ ಪ್ರತಿ ನಿತ್ಯ ಊಟ ನೀಡಿ ವರದರಾಜು ಆರೋಗ್ಯ ವಿಚಾರಿಸಿ ಕಷ್ಟ ಸುಖ ನೊಡುತ್ತಿದ್ದ ತಂಗಿ ಪದ್ಮಮ್ಮ ಅಣ್ಣ ಕಾಣದಿದ್ದನ್ನು ಗಮನಿಸಿ ತಮ್ಮ ರಾಮದಾಸ್ ನನ್ನು ಪ್ರಶ್ನೆ ಮಾಡಿದಾಗ ಮನೆಯವರು ಕರೆದುಕೊಂಡು ಹೊಗಿರುವುದಾಗಿ ಹೇಳಿದ್ದು ಅನುಮಾನ ಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಡಿದಾಗ ಮಂಗಳವಾರ ಪ್ರಕರಣ ಬೆಳಕಿಗೆ ಬಂದಿದೆ ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಮೃತದೇಹವನ್ನು ಬುಧವಾರ ಉಪ ವಿಭಾಗಾಧಿಕಾರಿಗಳ ಸಮ್ಣುಖದಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸುತ್ತಾರೆ ಎಂದು ತಿಳಿದು ಬಂದಿದೆ @publicnewskunigal