ನ್ಯಾಯಲಯದ ಆದೇಶ ಹಿನ್ನೆಲೆ ವಾರಸುದಾರರಿಲ್ಲದ ವಿವಿಧ ಮಾದರಿಯ ವಾಹನಗಳ ಬಹಿರಂಗ ಹರಾಜು!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಡಿಯಲ್ಲಿ ವಶಪಡಿಸಿಕೊಳ್ಳಲಾದ ವಾರಸುದಾರರು ಇಲ್ಲದ ವಿವಿಧ ಮಾದರಿಯ 41 ದ್ವಿಚಕ್ರ ವಾಹನ 2 ಆಟೊ 1 ಟಾಟಾ ಗೂಡ್ಸ್ ವಾಹನ ಹಾಗೂ 1 ಟ್ರಾಕ್ಟರ್ ಟೈಲರ್ ಗಳನ್ನು ನ್ಯಾಯಲಯದ ಆದೇಶ ಅನುಸಾರ ದಿನಾಂಕ 13 ರಂದು ಹುಲಿಯೂರುದುರ್ಗ ಪೂಲೀಸ್ ಠಾಣೆಯ ಅವರಣದಲ್ಲಿ ಬೆಳಗ್ಗೆ 10 ಗಂಟೆಗೆ ಬಹಿರಂಗ ಹರಾಜು ಮಾಡಲಾಗುವುದು ಎಂದು ಠಾಣೆಯ ಪಿ.ಎಸ್.ಐ ಪ್ರಶಾಂತ್ ತಿಳಿಸಿದ್ದಾರೆ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುವ ಆಸಕ್ತರು ಮುಂಗಡವಾಗಿ ಐದು ಸಾವಿರ ರೂಪಾಯಿ ಠೇವಣಿ ತುಂಬಿ ನಿಬಂಧನೆಗಳಿಗೆ ಒಳಪಟ್ಟು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಬಹುದಾಗಿದ್ದು ಹೆಚ್ಚಿನ ವಿವರಗಳಿಗಗಿ ಹುಲಿಯೂರುದುರ್ಗ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ @publicnewskunigal