ನ್ಯಾಯಲಯಕ್ಕೆ ಹಾಜರಾಗದ ತಹಶೀಲ್ದಾರ್ ರನ್ನು ಹಾಜರು ಪಡಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ ಭೂ ಕಬಳಿಕೆ ವಿಶೇಷ ನ್ಯಾಯಾಲಯ!
ಕುಣಿಗಲ್ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ಸಮಗ್ರ ವರದಿ ಸಲ್ಲಿಸದ ಹಿನ್ನೆಲೆಯಲ್ಲಿ ನ್ಯಾಯಾಲಯವು ಕುಣಿಗಲ್ ಪೊಲೀಸ್ ಇನ್ಸ್‌ಪೆಕ್ಟರ್ ಅವರು ವರದಿ ಸಮೇತ ತಹಶೀಲ್ದಾರ್ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಸೂಚಿಸಿದೆ ಕುಣಿಗಲ್ ತಾಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ಗೋಮಾಳ ಜಾಗ ಅತಿಕ್ರಮವಾಗಿದೆ ಎಂದು ಗ್ರಾಮಸ್ಥರೊಬ್ಬರು 2023ರಲ್ಲಿ ಭೂ ಕಬಳಿಕೆ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು, ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ
ನ್ಯಾಯಾಲಯವು ಸದರಿ ಗೋಮಾಳ ಜಮೀನಿನ ಪ್ರಸ್ತುತ ಸ್ಥಿತಿಯ ವರದಿ ನೀಡುವಂತೆ ತಹಶೀಲ್ದಾರ್ ಅವರಿಗೆ ಹಲವು ಬಾರಿ ಸೂಚನೆ ನೀಡಿತ್ತು ಆದರೆ ತಹಶೀಲ್ದಾರ್ ಯಾವುದೇ ವರದಿ ನೀಡದ ಹಿನ್ನೆಲೆಯಲ್ಲಿ ಪ್ರಕರಣವನ್ನು ನವೆಂಬರ್ 11ಕ್ಕೆ ವಿಚಾರಣೆಗೆ ಕೈಗೊಂಡಿರುವ ನ್ಯಾಯಾಲಯವು ಕುಣಿಗಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅವರಿಗೆ ತಹಶೀಲ್ದಾರ್ ಅವರು 25,000 ಮೊತ್ತದ ಜಾಮೀನು ಸಹಿತ ದಸ್ತಗಿರಿ ವಾರೆಂಟ್ ಬರೆದುಕೊಟ್ಟು, ಜಮೀನಿನ ಪ್ರಸ್ತುತ ವರದಿಯೊಂದಿಗೆ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನಿರ್ದೇಶನ ನೀಡಿದೆ @publicnewskunigal