ವಿವಿಧ ಪ್ರಕರಣಗಳಡಿಯಲ್ಲಿ ರಸ್ತೆ ನಿಯಮ ಉಲ್ಲಂಘಿಸಿದ ನಲವತ್ತು ವಾಹನಗಳಿಗೆ ದಂಡ ವಿಧಿಸಿದ ಆರ್,ಟಿ,ಒ ಅಧಿಕಾರಿಗಳು!
ಕುಣಿಗಲ್ ಪಟ್ಟಣದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್,ಟಿ,ಒ) ಅಧಿಕಾರಿಗಳು ರಸ್ತೆ ನಿಯಮಗಳನ್ನು ಉಲ್ಲಂಘಿಸಿ ಒಡಾಡುತ್ತಿದ್ದ ವಿವಿಧ ಮಾದರಿಯ 40 ವಾಹನಗಳಿಗೆ ಮಂಗಳವಾರ ದಂಡ ವಿಧಿಸಿದ್ದಾರೆ ಟಿಪ್ಪರ್ ಲಾರಿಗಳಲ್ಲಿ ಎಂ ಸ್ಯಾಂಡ್, ಜಲ್ಲಿ ಸಾಗಿಸುವಾಗ ಮೇಲೆ ಹೊದಿಕೆ ಹಾಕದ ಕಾರಣ ಹಿಂಬದಿಯಿಂದ ಬರುವ ವಾಹನಗಳಿಗೆ ಸಮಸ್ಯೆಯಾಗುತ್ತಿದ್ದು ಅಂತಹ ವಾಹನಗಳಿಗೆ ದಂಡ ವಿಧಿಸಲಾಗಿದೆ ಕಳೆದ ಮೂರು ವರ್ಷಗಳಿಂದ ಎಫ್.ಸಿ ಇನ್ಶೂರೆನ್ಸ್, ಪರ್ಮಿಟ್ ಇಲ್ಲದೆ ಒಡಾಡುತ್ತಿದ್ದ ಒಂದು ಟಿಪ್ಪರ್ ಲಾರಿಯನ್ನು ಜಪ್ತಿ ಮಾಡಲಾಗಿದೆ ಇದಲ್ಲದೆ ರಸ್ತೆ ನಿಯಮ ಉಲ್ಲಂಘಿಸಿ ಒಡಾಡುತ್ತಿದ್ದ ಆಟೊ, ಟ್ರಾಕ್ಟರ್, ಗೂಡ್ಸ್ ವಾಹನ,ಸೇರಿದಂತೆ ನಲವತ್ತಕ್ಕೂ ಹೆಚ್ಚು ವಾಹನಗಳಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಸದೃಲ್ಲಾ ಶರೀಫ್ ದಂಡ ವಿಧಿಸಿ ಪ್ರಕರಣ ದಾಖಲಿಸಿ ರಸ್ತೆ ನಿಯಮಗಳನ್ನು ಪಾಲಿಸುವಂತೆ ತಿಳುವಳಿಕೆ ನೊಟಿಸ್ ನೀಡಿದ್ದಾರೆ @publicnewskunigal