ವಿದ್ಯುತ್ ಶಾಕ್ ನಿಂದಾಗಿ ಅರಣ್ಯಾಧಿಕಾರಿ ಸಾವು ಗಣ್ಯರ ಕಂಬನಿ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದ ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯಧಿಕಾರಿಯಾಗಿ ಕಳೆದ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ತುರುವೆಕೆರೆ ಮೂಲದ ಜಗದೀಶ್.ಪಿ ರವರು ಹಾಸನದಲ್ಲಿ ಭಾನುವಾರ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ 2004 ರಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆಗೆ ಸೇರಿದ ನಂತರ ಶಿರಶಿ,ಹಾಸನ,ತಿಪಟೂರು, ಸೆರಿದಂತೆ ಕುಣಿಗಲ್, ನಲ್ಲಿ ಕೆಲಸ ನಿರ್ವಹಿಸಿ ಜನಮನ್ನಣೆ ಗಳಿಸಿದ್ದ ಜಗದೀಶ್ ರವರು ಪತ್ನಿ ಮಕ್ಕಳೊಂದಿಗೆ ಹಾಸನದಲ್ಲಿ ನೆಲೆಸಿದ್ದರು ಶನಿವಾರ ಕರ್ತಯ್ಯ ಮುಗಿಸಿ ಹಾಸನಕ್ಕೆ ತೆರಳಿದ್ದರು ಭಾನುವಾರ ಮಧ್ಯಾಹ್ನ ನಿರ್ಮಾಣ ಹಂತದ ಮನೆಯಲ್ಲಿ ಇದ್ದವೇಳೆ ವಿದ್ಯುತ್ ಶಾಕ್ ತಗುಲಿದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ ಮೃತರಿಗೆ ಪತ್ನಿ ಇಬ್ಬರು ಪುತ್ರಿಯರು ತಂದೆ ತಾಯಿ ಅಪಾರ ಬಂದು ಬಳಗ ಅಗಲಿದ್ದಾರೆ, ಕುಣಿಗಲ್ ಶಾಸಕ ಡಾ.ರಂಗನಾಥ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಮೃತರಿಗೆ ಸಂತಾಪ ಸೂಚಿಸಿದ್ದು, ಮೃತರ ಅಂತ್ಯ ಸಂಸ್ಕಾರ ತುರುವೆಕೆರೆ ತಾಲ್ಲೂಕಿನ ಸ್ವಗ್ರಾಮ ಮೆಲುವರಗೆರಹಳ್ಳಿ ಯಲ್ಲಿ ಸೋಮವಾರ ಹತ್ತು ಗಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ಧಾರೆ @publicnewskunigal