ಕೆಶಿಫ್ ಅಧಿಕಾರಿಗಳ ಚೆಲ್ಲಾಟ ವಾಹನ ಸವಾರರ ಪರದಾಟ ರಾಜ್ಯಹೆದ್ದಾರಿ 85ರಲ್ಲಿ ದ್ವಿಚಕ್ರ ವಾಹನ ಸವಾರರ ಪ್ರಾಣಕ್ಕೆ ಗ್ಯಾರಂಟಿ ಇಲ್ಲ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ರಾಜ್ಯ ಹೆದ್ದಾರಿ 85ರ ರಾಜೇಂದ್ರಪುರ ಅರಣ್ಯ ಪ್ರದೇಶದ ವ್ಯಾಪ್ತಿಯಿಂದ ಶ್ರೀ ಕಾಳಿಕಾಂಭ ದೇವಾಲಯದ ಸಮೀಪ ರಸ್ತೆ ತಿರುವಿನ ವರೆಗೆ ರಸ್ತೆಯುದ್ದಕ್ಕೂ ಜಲ್ಲಿ ಕಲ್ಲುಗಳು ಬಿದ್ದಿರುವ ಕಾರಣ ಚೌಡನಕುಪ್ಪೆ ಕಡೆಯಿಂದ ಹುಲಿಯೂರುದುರ್ಗ ಕಡೆಗೆ ತೆರಳುವ ದ್ವಿಚಕ್ರ ವಾಹನ ಸವಾರರು ಕೆಳಗೆ ಬಿದ್ದು ಗುರುವಾರ ಒಂದೆ ದಿನದಲ್ಲಿ ನಾಲ್ಕೈದು ಮಂದಿಗೆ ಗಾಯಗಳಾಗಿವೆ,ಜಲ್ಲಿ ಎಂಸ್ಯಾಂಡ್ ಸಾಗಿಸುವ ಟಿಪ್ಪರ್ ಲಾರಿಗಳು ಲಾರಿಯ ಮೇಲೆ ಟಾರ್ಪಲ್ ಅಥಾವ ಹೊದಿಕೆ ಹಾಕದೆ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಸಂಚಾರ ಮಾಡುವ ಕಾರಣ ತಿರುವಿನಲ್ಲಿ ರಸ್ತೆಯುದ್ದಕ್ಕೂ ಜಲ್ಲಿ ಮತ್ತು ಎಂಸ್ಯಾಂಡ್ ಬಿದ್ದು ದ್ವಿಚಕ್ರ ವಾಹನ ಸವಾರರಿಗೆ ಗಂಭೀರ ಗಾಯಗಳಾಗಿವೆ ಈ ಬಗ್ಗೆ ಗಮನ ಹರಿಸಬೇಕಿದ್ದ ರಾಜ್ಯ ಹೆದ್ದಾರಿ 85ರ ಕೆಶಿಫ್ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಪೊಲೀಸರು ಇತ್ತ ಗಮನ ಹರಿಸಿ ರಸ್ತೆ ಅಪಘಾತ ತಪ್ಪಿಸಬೇಕಿದೆ ಎಂದು ವಾಹನ ಸವಾರರು ಹಾಗೂ ಸ್ಥಳಿಯರಾದ ಹುಲಿಕಟ್ಟೆ ರವಿ,ಹಂದಲಗೆರೆ ಕುಮಾರ್, ನಾಗರಾಜು, ಕಾಂತರಾಜು, ಆಗ್ರಹಿಸಿದ್ದಾರೆ@publicnewskunigal