ಆಶ್ರಯ ಯೋಜನೆಯಡಿ ಹಕ್ಕುಪತ್ರ ಪಡೆದಿರುವ ನಾಗರೀಕರು ತುರ್ತಾಗಿ ದಾಖಲೆ ಸಲ್ಲಿಸಲು ಮನವಿ!

Spread the love

ಆಶ್ರಯ ಯೋಜನೆಯಡಿ ಈ ಹಿಂದೆ ಹಕ್ಕುಪತ್ರ ಪಡೆದಿರುವ ನಾಗರೀಕರು ಅಗತ್ಯ ದಾಖಲೆಗಳೊಂದಿಗೆ ತುರ್ತಾಗಿ ದಾಖಲೆ ಸಲ್ಲಿಸಲು ಮನವಿ,

ಕುಣಿಗಲ್ ತಾಲ್ಲೂಕಿನಾದ್ಯಂತ ಆಶ್ರಯ ಯೋಜನೆ ಯಡಿಯಲ್ಲಿ ಈ ಹಿಂದೆ ಹಕ್ಕು ಪತ್ರ ಪಡೆದಿರುವ ನಾಗರಿಕರು ಅಗತ್ಯ ದಾಖಲೆಗಳೊಂದಿಗೆ ತುರ್ತಾಗಿ ತಾಲ್ಲೂಕು ಪಂಚಾಯಿತಿ ಕಚೇರಿಗೆ ದಾಖಲೆ ಸಲ್ಲಿಸುವಂತೆ ಕಾರ್ಯನಿರ್ವಹಣಾಧಿಕಾರಿ ಜೋಸೆಫ್ ತಿಳಿಸಿದ್ದಾರೆ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಜನ ಸಂಪರ್ಕ ಸಭೆಯಲ್ಲಿ ಸಂಸದ ಡಿ,ಕೆ ಸುರೇಶ್ ಹಾಗೂ ಶಾಸಕ ಡಾ,ರಂಗನಾಥ್ ಮಾತನಾಡಿ ತಾಲೂಕಿನಲ್ಲಿ ವಸತಿ ರಹಿತರಿಗೆ ನಿವೇಶನ ನಿಡುವ ಸಂಬಂಧ ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳ ಪೈಕಿ ಈ ಗಾಗಲೆ ಹಲವು ಕಡೆಗಳಲ್ಲಿ ಆಶ್ರಯ ಯೋಜನೆಯಡಿ ನಿವೇಶನ ನೀಡುವ ಸಂಬಂಧ ಸ್ಥಳ ಗುರುತಿಸಲಾಗಿದ್ದು ಈ ಹಿಂದೆ ಆಶ್ರಯ ಯೋಜನೆಯಡಿಯಲ್ಲಿ ತಾಲ್ಲೂಕಿನಾದ್ಯಂತ ಹಕ್ಕು ಪತ್ರ ಪಡೆದವರ ಬಗ್ಗೆ ಮಾಹಿತಿಯನ್ನು ಕ್ರೂಡಿಕರಿಸಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಆಶ್ರಯ ಯೋಜನೆಯಡಿ ಈ ಹಿಂದೆ ತಾಲ್ಲೂಕು ಪಂಚಾಯ್ತಿ ವತಿಯಿಂದ ಹಕ್ಕುಪತ್ರ ಪಡೆದಿರುವ ನಾಗರಿಕರು ತುರ್ತಾಗಿ ಅಗತ್ಯ ದಾಖಲೆಗಳೊಂದಿಗೆ ತಾಲ್ಲೂಕು ಪಂಚಾಯಿತ್ತಿ ಕಚೇರಿಗೆ ಮಾಹಿತಿ ಸಲ್ಲಿಸುವಂತೆ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ @publicnewskunigal