ಅಪ್ರಾಪ್ತೆಯ ಮೇಲೆ ಅತ್ಯಚಾರ ಪ್ರಕರಣ ಮೂವರಿಗೆ ಜೀವಾವಧಿ ಶಿಕ್ಷೆ!

Spread the love

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಮೂವರು ಆರೋಪಿಗಳಿಗೆ ತುಮಕೂರು ಜಿಲ್ಲಾ ಮತ್ತು ಸತ್ರ ಘನ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ!

ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ ಬ್ಯಾಡರಹಳ್ಳಿ ಗ್ರಾಮದ 14 ವರ್ಷದ ಅಪ್ರಾಪ್ತೆಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸದಂತೆ ಗ್ರಾಮದ ಮೂವರು ಆರೋಪಿಗಳಾದ ರಾಮಚಂದ್ರಯ್ಯ(60) ಹೊಸವಿ ರಾಮಯ್ಯ ಅಲಿಯಾಸ್ ಕೂಮಯ್ಯ (65) ವೆಂಕಟೇಶ್ ಅಲಿಯಾಸ್ ವೆಂಕಟಪ್ಪ (45) ಎಂಬುವವರಿಗೆ ತುಮಕೂರು ಜಿಲ್ಲಾ ಮತ್ತು ಸತ್ರ ಘನ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತಲಾ ಎರಡು ಲಕ್ಷ ರೂಪಾಯಿ ದಂಡ ಜೋತೆಗೆ ಬಾಲಕಿಗೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ

2019 ರಲ್ಲಿ ಅಮೃತೂರು ವೃತ್ತದ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು ಅಂದಿನ ವೃತ್ತ ನಿರೀಕ್ಷಕರಾದ ಎ,ಎನ್ ಅಶೋಕ್ ಕುಮಾರ್ ರವರು ಪ್ರಕರಣದ ತನಿಖೆ ನಡೆಸಿ ಘನ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪ ಪತ್ರ ಸಲ್ಲಿಸಿದ್ದರು

ತುಮಕೂರು ಜಿಲ್ಲಾ ಮತ್ತು ಸತ್ರ ಘನ ನ್ಯಾಯಾಲಯದ ಸಾರ್ವಜನಿಕ ಅಭಿಯೋಜಕಿ ಶ್ರೀಮತಿ ಆಶಾ ರವರು ವಾದ ಮಂಡಿಸಿದ್ದರು ಘನ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ತಲಾ ಎರಡು ಲಕ್ಷರೂಪಾಯಿ ದಂಡ ಹಾಗೂ ಸಂತ್ರಸ್ತೆ ಬಾಲಕಿಗೆ 10 ಲಕ್ಷ ಪರಿಹಾರ ನೀಡುವಂತೆ ಆದೇಶಿದೆ @publicnewskunigal