ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಎ,ಎಸ್,ಐ(ASI) ಚಿಕಿತ್ಸೆ ಫಲಿಸದೆ ಸಾವು!
ಕುಣಿಗಲ್:-ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕುಣಿಗಲ್ ಪೊಲೀಸ್ ಠಾಣೆಯ ಎ,ಎಸ್,ಐ ಚಿಕಿತ್ಸೆ ಫಲಕಾರಿಯಾಗದೇ ಮೇ16ರ ಗುರುವಾರ ಮೃತಪಟ್ಟಿದ್ದಾರೆ.ಕುಣಿಗಲ್ ಪೊಲೀಸ್ ಠಾಣೆಯ ಎ,ಎಸ್,ಐ ವೆಂಕಟೇಶ್ (50) ಮೃತ ದುದೈವಿ ವೆಂಕಟೇಶ್ ಕರ್ತವ್ಯ ನಿಮಿತ್ತ ಬುಧವಾರ ಸಂಜೆ ಯಡಿಯೂರಿಗೆ ಹೋಗಿ ಬೈಕ್ ನಲ್ಲಿ ಕುಣಿಗಲ್ ಗೆ ವಾಪಸ್ ಬರುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 75ರ ಬಿ.ಎಂ ರಸ್ತೆ ಆಲಪ್ಪನಗುಡ್ಡೆ ಸಮೀಪ ಯಡಿಯೂರು ಕಡೆಯಿಂದ ಬಂದ ಅಪರಿಚಿತ ವಾಹನ ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಎ,ಎಸ್,ಐ ವೆಂಕಟೇಶ್ ಬೈಕ್ ನಿಂದು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು ಅವರನ್ನು ಬೆಳ್ಳೂರು ಕ್ರಾಸ್ ನ ಅಂದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಗೆಬೆಳಿಗ್ಗೆ ಮೃತಪಟ್ಟಿದ್ದಾರೆ ಶಿರಾ ತಾಲ್ಲೂಕಿನ ಎಮ್ಮೆರಹಳ್ಳಿತಾಂಡ್ಯ ನಿವಾಸಿಯಾದ ವೆಂಕಟೇಶ್ ರವರು ಕಳೆದ ಇಪ್ಪತ್ತು ವರ್ಷಗಳಿಂದ
ತಾಲ್ಲೂಕಿನ ಹುಲಿಯೂರುದುರ್ಗ,ಅಮೃತೂರು,ಹಾಗೂ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು ಇತ್ತಿಚೆಗಷ್ಟೆ ಎ,ಎಸ್,ಐ ಹಾಗಿ ಬಡ್ತಿ ಹೊಂದಿ ಕುಣಿಗಲ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ವೆಂಕಟೇಶ್ ಮೃತದೇಹವನ್ನು ಗುರುವಾರ ಮಧ್ಯಾಹ್ನ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು ಈ ವೇಳೆ ಕುಣಿಗಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಸಿಬ್ಬಂದಿ ವರ್ಗ ಹಾಗೂ ಪಟ್ಟಣದ ನಾಗರೀಕರು ಅಂತಿಮ ನಮನ ಸಲ್ಲಿಸಿದರು ಬಳಿಕ ಮೃತ ದೇಹವನ್ನು ಕುಟುಂಬಸ್ಥರು ಸ್ವ ಗ್ರಾಮಕ್ಕೆ ಕೊಂಡೊಯ್ದರು @publicnewskunigal