ಕುಣಿಗಲ್ ಸುದ್ದಿ:-ಸಿಲಿಂಡರ್ ಸ್ಪೋಟ ಪ್ರಕರಣ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೆರಿದ್ದ ಆರು ಜನರಲ್ಲಿ ಚಿಕಿತ್ಸೆ ಫಲಿಸದೆ ಇಬ್ಬರ ಸಾವು!
ಕುಣಿಗಲ್ ಪಟ್ಟಣದ ಸಂತೆಬೀದಿಯಲ್ಲಿ ಇರುವ ರವಿಕುಮಾರ್ ಎಂಬುವವರ ಮನೆಯಲ್ಲಿ ಮೇ16ರ ಸಂಜೆ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿದ್ದ ಆರು ಮಂದಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮನೆಯ ಮಾಲಿಕ ರವಿಕುಮಾರ್ ಮಗ (11)ವರ್ಷದ ಕುಶಾಲ್ ಹಾಗೂ (46) ವರ್ಷದ ಸಮೀನಾ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ