Skip to content
March 7, 2026
  • ಅಭಿವೃದ್ದಿ

KUNIGAL NEWS

Primary Menu
  • ಅಭಿವೃದ್ದಿ
Light/Dark Button
Watch Video
  • Home
  • 2023
  • March
  • ಮಾಜಿ ಸಂಸದ ಎಸ್ಪಿ ಮುದ್ದಹನುಮೇಗೌಡ ನೇತೃತ್ವದಲ್ಲಿ ಬೃಹತ್ ಮಟ್ಟದ ಪಕ್ಷ ಸೇರ್ಪಡೆ ಕಾರ್ಯಕ್ರಮ
  • Daily news

ಮಾಜಿ ಸಂಸದ ಎಸ್ಪಿ ಮುದ್ದಹನುಮೇಗೌಡ ನೇತೃತ್ವದಲ್ಲಿ ಬೃಹತ್ ಮಟ್ಟದ ಪಕ್ಷ ಸೇರ್ಪಡೆ ಕಾರ್ಯಕ್ರಮ

Publicnewskunigal March 26, 2023 (Last updated: March 27, 2023) 1 minute read
Spread the love

ಕುಣಿಗಲ್ ತಾಲ್ಲೂಕಿನ ಅಂಚೆಪಾಳ್ಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಮಾಜಿ ಸಂಸದ ಎಸ್ಪಿ ಮುದ್ದಹನುಮೇಗೌಡ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಭಾಗ್ಯಮ್ಮ ಹಾಗೂ ಪತಿ ಕೆಂಪಿರೇಗೌಡ ಪುರಸಭಾ ಮಾಜಿ ಅಧ್ಯಕ್ಷ ನಳಿನಾ ಭೈರಪ್ಪ ಹಾಗೂ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಕೆಂಪೇಗೌಡ ವಕೀಲ ಶಿವಶಂಕರ್ ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಬಿಜೆಪಿ ಪಕ್ಷಕ್ಕೆ ಇದೆ ವೇಳೆ ಸೇರ್ಪಡೆಯಾದರು ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬೃಹತ್ ಮಟ್ಟದಲ್ಲಿ ಮಾಜಿ ಸಂಸದರನ್ನು ಬೆಂಬಲಿಸಿ ಪಕ್ಷ ಸೇರ್ಪಡೆಯಾಗಿರುವುದು ಕೈ ಪಾಳಯಕ್ಕೆ ಬಾರಿ ಹೊಡೆತ ಬಿದ್ದಂತಾಗಿದೆ

https://fb.watch/jx0QZ8sFSt/?mibextid=RUbZ1f

ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರ್ಪಡೆಯಾದ ಬಳಿಕ ಮಾಜಿ ಸಂಸದ ಎಸ್.ಪಿ ಮುದ್ದಹನುಮೆಗೌಡ ಸದ್ದಿಲ್ಲದಂತೆ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಹಾಗೂ ಕಿರಿಯ ಮುಖಂಡರನ್ನು ಸೇರಿದಂತೆ ಹಲವರನ್ನು ಬಿಜೆಪಿಗೆ ಕರೆತರುವ ಮೂಲಕ ಹಾಲಿ ಶಾಸಕರ ನಿದ್ದೆಗೆಡಿಸಿದ್ದಾರೆ,ಹಾಗೂ ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಜೆಪಿ ಪಕ್ಷವನ್ನು ತಾಲೂಕಿನ ಕಾಂಗ್ರೆಸ್ ಮುಖಂಡರು ಸೇರಲಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡ ಡಿ.ಕೆ ಬ್ರದರ್ಸ್ ಗೆ ಕುಟುಕಿದ್ದಾರೆ,

ಈ ವೇಳೆ ಮಾತನಾಡಿದ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿ.ಕೆ ಸುರೇಶ್ ಜೊತೆಗೆ ಡಾ.ಜಿ ಪರಮೇಶ್ವರ್ ಕೂಡ ಪಿತೂರಿ ನಡೆಸಿ ನನ್ನನ್ನು ಎರಡನೇ ಸಲ ಸಂಸತ್ ಸದಸ್ಯನಾಗದಂತೆ ತಡೆದರು ಎಂದು ಮಾಜಿ ಸಂಸದ ಎಸ್.ಪಿ.ಎಮ್ ಹೊಸ ಬಾಂಬ್ ಸಿಡಿಸಿದ್ದಾರೆ ಕುಣಿಗಲ್ ನ ಅಂಚೆಪಾಳ್ಯ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನನ್ನು ರಾಜಕೀಯವಾಗಿ ಮುಗಿಸುವ ಸಲುವಾಗಿ ದೇವೇಗೌಡರನ್ನು ಬಲವಂತವಾಗಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಡಿದರು ಸಂಸದ ಡಿ.ಕೆ ಸುರೇಶ್ ನನ್ನ ಮನೆಗೆ ಬಂದು ಜೆಡಿಎಸ್ ನಿಂದ ಸ್ಪರ್ಧಿಸುವಂತೆ ಬಲವಂತ ಮಾಡಿದ್ದರು

https://docs.google.com/forms/d/15HJFb-fie37uykccsstiafrmAgXksRfQ5fJEjjqal4E/edit

ಒಕ್ಕಲಿಗ ಸಮುದಾಯದ ಮತ್ತೊಬ್ಬ ನಾಯಕ ಎರಡನೇ ಬಾರಿಗೆ ಸಂಸತ್ ಸದಸ್ಯನಾಗಿ ಹೋದರೆ ರಾಜಕೀಯವಾಗಿ ಪ್ರಭಾವಿ ಆಗಬಹುದು ಎಂಬ ದುರುದ್ದೇಶದಿಂದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರೊಂದಿಗೆ ಸೇರಿ ಉದ್ದೇಶಪೂರ್ವಕವಾಗಿ ಡಿ.ಕೆ ಸಹೋದರರು ಕಾಂಗ್ರೆಸ್ ನಿಂದ ಟಿಕೆಟ್ ತಪ್ಪಿಸಿದರು ಈ ಬಗ್ಗೆ ಸಾರ್ವಜನಿಕವಾಗಿ ಎಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ಧನಿದ್ದೆನೆ ಎಂದು ನೇರವಾಗಿ ಡಿ.ಕೆ ಸಹೋದರಿಗೆ ನೇರವಾಗಿ ಸವಾಲೆಸೆದರು ನಿಮ್ಮ ಕುಟುಂಬದ ಸದಸ್ಯರೆಲ್ಲರಿಗೂ ಅಧಿಕಾರ ಬೇಕು ಆದರೆ ನಾನು ಮಾತ್ರ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಬಾರದು ನಾನು ಕಾಂಗ್ರೆಸ್ ನಲ್ಲಿದ್ದಾಗಲೇ ಯಡಿಯೂರಿನ ಕಾರ್ಯಕ್ರಮ ಒಂದರಲ್ಲಿ ನಾನು ಇರುವ ವರೆಗೆ ಕುಣಿಗಲ್ ನಲ್ಲಿ ಡಾ,ರಂಗನಾಥ್ ಟಿಕೆಟ್ ಎಂದು ಮಾತನಾಡಿದ ಸಂಸದ ಡಿಕೆ ಸುರೇಶ್ ಗೆ ಕುಣಿಗಲ್ ನಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಪಾಠ ಕಲಿಸುವೆ

ಒಕ್ಕಲಿಗ ಸಮುದಾಯದ ಹಿರಿಯರಾದ ಎಚ್ ಡಿ ದೇವೇಗೌಡರು ನನಗೆ ಟಿಕೆಟ್ ಬಿಟ್ಟು ಕೊಡಬೇಕಿತ್ತು ಅವರು ಹೇಳುತ್ತಾರೆ ಎಂದು ನಾನು ಕೊನೆಯವರೆಗೂ ಕಾದೆ ಆದರೆ ಅವರಿಗೂ ಅಂತಹ ದೊಡ್ಡ ಗುಣ ಬರಲೇ ಇಲ್ಲ ಅವರನ್ನು ಇದೇ ಕಾಂಗ್ರೆಸ್ ಮುಖಂಡರು ಕರೆತಂದು ವ್ಯವಸ್ಥಿತವಾಗಿ ಸೋಲಿಸಿ ಮಾಜಿ ಪ್ರಧಾನಿಯವರಿಗೆ ಅಪಮಾನ ಮಾಡಿದ ಕೀರ್ತಿ ಕಾಂಗ್ರೆಸ್ ನಾಯಕರಿಗೆ ಸಲ್ಲುತ್ತದೆ ಇನ್ನು ಜಿಲ್ಲೆಯಾದ್ಯಂತ ಬಿಜೆಪಿ ಪಕ್ಷದ ಶಾಸಕರನ್ನು ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸುವ ಜವಾಬ್ದಾರಿಯೂ ಕೂಡ ನಮ್ಮ ಮೇಲಿದ್ದು ಜಿಲ್ಲೆಯಾದ್ಯಂತ ಪಕ್ಷ ಸಂಘಟನೆ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಲಾಗುವುದು ಡಿ.ಕೆ ಸಹೋದರರು ಮಾಡಿರುವ ಅನ್ಯಾಯವನ್ನು ಕುಣಿಗಲ್ ತಾಲ್ಲೂಕಿನ ಜನರು ಎಂದಿಗೂ ಮರೆಯುವುದಿಲ್ಲ

ಬಿಜೆಪಿ ಪಕ್ಷಕ್ಕೆ ನಾನು ಸೇರ್ಪಡೆಯಾದ ಬಳಿಕ ಪಕ್ಷ ನನ್ನನ್ನು ಗೌರವಯುತವಾಗಿ ನಡೆಸಿಕೊಂಡಿದೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಯಾರೆ ಅಭ್ಯರ್ಥಿಯಾದರು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವೆವು ಎಂದರು ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ವೈ.ಹೆಚ್ ಹುಚ್ಚಯ್ಯ ಕುಣಿಗಲ್ ಹುಟ್ಟು ಹೊರಾಟಗಾರರನ್ನ ಕೊಡುಗೆ ಕೊಟ್ಟ ತಾಲ್ಲೂಕು ಆದರೆ ಕಾಂಗ್ರೆಸ್ ಶಾಸಕರು ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಆದರೆ ಕಾಂಗ್ರೆಸ್ ಮನೆಯನ್ನು ಮಾಜಿ ಸಂಸದ ಎಸ್.ಪಿ ಮುದ್ದಹನುಮೇಗೌಡ ರವರು ಸಾರಿಸಿ ಗುಡಿಸಿ ರಂಗೋಲಿ ಹಾಕಿ ಬಂದಿದ್ದಾರೆ ತಾಲೂಕಿನಲ್ಲಿ ಕಾಂಗ್ರೆಸ್ ಸಂಪೂರ್ಣ ನಿರ್ನಾಮವಾಗಿ ಮುದ್ದಹನುಮೇಗೌಡರು ಬಿಜೆಪಿ ಪಕ್ಷಕ್ಕೆ ಬಂದ ಬಳಿಕ ತಾಲೂಕಿನಲ್ಲಿ ಕಾಂಗ್ರೆಸ್ನ ಶಕ್ತಿ ಕುಂದಿದ್ದು ಕೆಲವೇ ದಿನಗಳಲ್ಲಿ ಕುಣಿಗಲ್ ನಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಒಬ್ಬ ಸಜ್ಜನ ರಾಜಕಾರಣಿ ಜಿಲ್ಲೆಗೆ ಕೀರ್ತಿ ತಂದ ಮಾಜಿ ಸಂಸದರಿಗೆ ಕಾಂಗ್ರೆಸ್ ಪಕ್ಷ ಯಾವ ರೀತಿಯಲ್ಲಿ ನಡೆಸಿಕೊಂಡಿದೆ ಎಂಬುದು ತಾಲ್ಲೂಕಿನ ಜನತೆಗೆ ತಿಳಿದಿದೆ ಮುಂಬರುವ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮೂರು ಜನ ನಾಯಕರು ತಾಲೂಕಿನಲ್ಲಿ ಶ್ರಮಿಸಲಿದ್ದಾರೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಂದೀಶ್,ಮಾಜಿ ಶಾಸಕ ಬಿ.ಸುರೇಶ ಗೌಡ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವೈ.ಹೆಚ್ ಹುಚ್ಚಯ್ಯ ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಲರಾಮ ಹಾಗೂ ಮುಖಂಡರಾದ ಎಚ್.ಡಿ ರಾಜೇಶ್ ಗೌಡ,ಹರ್ಷವರ್ಧನ್ ಗೌಡ ಸೇರಿದಂತೆ ಹಲವು ಮಂದಿ ಬಿಜೆಪಿ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

About the Author

Publicnewskunigal

Administrator

View All Posts
Post Views: 722

Related

Post navigation

Previous: ನ್ಯಾಯಾಲಯದ ಆದೇಶ ಉಲ್ಲಂಘನೆ ತಹಶೀಲ್ದಾರ್,ಪಿಡಿಒ ಗೆ ಎರಡು ತಿಂಗಳು ಜೈಲು ಶಿಕ್ಷೆ
Next: ಕಸವಿಲೇವಾರಿ ವಾಹನವನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡ ಗ್ರಾ.ಪಂ ಬಿಲ್ ಕಲೆಕ್ಟರ್

Related Stories

IMG-20260304-WA0003
  • Daily news
  • KUNIGAL
  • MLA
  • State
  • TUMKUR

ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು!

Publicnewskunigal March 4, 2026 0
VideoCapture_20260226-100309
  • CRIME
  • Daily news
  • KUNIGAL
  • POLICE
  • State
  • TUMKUR

ಚಿಕ್ಕ ಕೆರೆಯ ಬಳಿ ಭೀಕರ ರಸ್ತೆ ಅಪಘಾತ ಒರ್ವ ಮಹಿಳೆ ಸ್ಥಳದಲ್ಲೆ ಸಾವು!

Publicnewskunigal February 26, 2026 0
  • Daily news

ಸಾವಿರಾರು ಭಕ್ತರ ಸಮ್ಮುಖದಲ್ಲಿ ತಪೊ ಕ್ಷೇತ್ರ ಕಗ್ಗೆರೆಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಂಪನ್ನ!

Publicnewskunigal February 24, 2026 0

Recent Posts

  • ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು!
  • ಚಿಕ್ಕ ಕೆರೆಯ ಬಳಿ ಭೀಕರ ರಸ್ತೆ ಅಪಘಾತ ಒರ್ವ ಮಹಿಳೆ ಸ್ಥಳದಲ್ಲೆ ಸಾವು!
  • ದಲಿತ ಮಹಿಳೆಗೆ ದೇಗುಲ ಪ್ರವೇಶಕ್ಕೆ ನಿರಾಕರಣೆ ಪ್ರಕರಣ ದಾಖಲು ಅರ್ಚಕನ ಬಂಧನ!
  • ಸಾವಿರಾರು ಭಕ್ತರ ಸಮ್ಮುಖದಲ್ಲಿ ತಪೊ ಕ್ಷೇತ್ರ ಕಗ್ಗೆರೆಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಂಪನ್ನ!
  • ನವಜಾತ ಶಿಶುವನ್ನು ರಸ್ತೆ ಬದಿಯಲ್ಲಿ ಎಸೆದು ಹೊದ್ರ ಹೆತ್ತವರು?

Archives

  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022

Categories

  • Bangalore
  • Beseom
  • BMTC
  • CRIME
  • Daily news
  • DK SURESH
  • Doctor
  • Highcourt
  • KSRTC
  • KUNIGAL
  • Magadi
  • MLA
  • POLICE
  • Politics
  • Sports
  • SSLC
  • State
  • Temple
  • TUMKUR
  • ಅಪಘಾತ
  • ಅಪರಾಧ
  • ಅಭಿವೃದ್ದಿ
  • ಅರಣ್ಯ
  • ಕ್ರೈಂ
  • ದಲಿತ
  • ಬಿಜೆಪಿ
  • ಭ್ರಷ್ಟಾಚಾರ
  • ರಾಜಕೀಯ
  • ವಾಮಾಚಾರ

You May Have Missed

IMG-20260304-WA0003
  • Daily news
  • KUNIGAL
  • MLA
  • State
  • TUMKUR

ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು!

Publicnewskunigal March 4, 2026 0
VideoCapture_20260226-100309
  • CRIME
  • Daily news
  • KUNIGAL
  • POLICE
  • State
  • TUMKUR

ಚಿಕ್ಕ ಕೆರೆಯ ಬಳಿ ಭೀಕರ ರಸ್ತೆ ಅಪಘಾತ ಒರ್ವ ಮಹಿಳೆ ಸ್ಥಳದಲ್ಲೆ ಸಾವು!

Publicnewskunigal February 26, 2026 0
IMG-20260225-WA0001
  • CRIME
  • KUNIGAL
  • State
  • Temple
  • TUMKUR

ದಲಿತ ಮಹಿಳೆಗೆ ದೇಗುಲ ಪ್ರವೇಶಕ್ಕೆ ನಿರಾಕರಣೆ ಪ್ರಕರಣ ದಾಖಲು ಅರ್ಚಕನ ಬಂಧನ!

Publicnewskunigal February 25, 2026 0
  • Daily news

ಸಾವಿರಾರು ಭಕ್ತರ ಸಮ್ಮುಖದಲ್ಲಿ ತಪೊ ಕ್ಷೇತ್ರ ಕಗ್ಗೆರೆಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಂಪನ್ನ!

Publicnewskunigal February 24, 2026 0
  • ಅಭಿವೃದ್ದಿ
Copyright © 2026 All rights reserved. | ReviewNews by AF themes.