ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದ ಹಳೆಪೇಟೆಯಲ್ಲಿ ಶುಕ್ರವಾರ ಇಬ್ಬರು ವ್ಯಕ್ತಿಗಳು ಅನುಮಾನಸ್ಪದ ರೀತಿಯಲ್ಲಿ ಒಡಾಡುತ್ತಿದ್ದನ್ನು ಗಮನಿಸಿದ ಸ್ಥಳಿಯರು ಮಕ್ಕಳ ಕಳ್ಳರೆಂದು ಭಾವಿಸಿ ಅಪರಿಚಿತ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು ಬಳಿಕ ಸ್ಥಳಕ್ಕೆ ಬಂದ ಹುಲಿಯೂರುದುರ್ಗ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲ್ಲೂಕಿನವರೆಂದು ತಿಳಿದು ಬಂದಿದ್ದು ಮದ್ದೂರು ಬಳಿ ಉಳಿದು ಕೊಂಡಿರುವ ಇವರುಗಳು ಹೊಟ್ಟೆಪಾಡಿಗಾಗಿ ಸ್ಥಳಿಯವಾಗಿ ಪ್ಲಾಸ್ಟಿಕ್ ವ್ಯಾಪಾರ ಹಾಗೂ ಶಾಸ್ತ್ರ ಹೇಳುವ ಕೆಲಸ ಮಾಡುತ್ತಿದ್ದರು ಎಂಬುದಾಗಿ ತಿಳಿದುಬಂದಿದ್ದು.
ಶುಕ್ರವಾರ ಹುಲಿಯೂರುದುರ್ಗ ಪಟ್ಟಣದ ಹಳೆಪೇಟೆಯಲ್ಲಿ ಅನುಮಾನಸ್ಪದ ವಾಗಿ ಒಡಾಡುತ್ತಿದ್ದರು ಹಾಗೂ ಮಕ್ಕಳ ಕಳ್ಳರೆಂದು ಭಾವಿಸಿದ ಸ್ಥಳಿಯರು ಹಲ್ಲೆ ನಡೆಸಿರುವ ಘಟನೆ ನಡೆದಿದೆ ಬಳಿಕ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸಿ ವಾಸ್ತವ ಅರಿತು ಕಳುಹಿಸಿದ್ದು ಹುಲಿಯೂರುದುರ್ಗ ಭಾಗದಲ್ಲಿ ಯಾವುದೆ ಮಕ್ಕಳ ಕಳ್ಳರು ಇರುವುದಿಲ್ಲ ವದಂತಿಗಳಿಗೆ ಕಿವಿಕೊಡದಿರಿ ಹಾಗೂ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ವಾಟ್ಸಪ್ ನಲ್ಲಿ ಬರುವ ಸಂದೇಶಗಳನ್ನು ಪರಿಶೀಲಿಸದೆ ಬೆರೆಯವರಿಗೆ ರವಾನೆ ಮಾಡದಿರಿ ಎಂದು ಹುಲಿಯೂರುದುರ್ಗ ಪೊಲೀಸರು ತಿಳಿಸಿದ್ದಾರೆ