ಖಾಸಗಿ ಫೈನಾನ್ಸ್ ಗಳ ಕಿರುಕುಳಕ್ಕೆ ಬೆಸತ್ತು ಮಹಿಳೆ ನೇಣಿಗೆ ಶರಣಾಗಿರುವ ಘಟನೆ ದಾಸನಪುರ ಗ್ರಾಮದಲ್ಲಿ ನಡೆದಿದೆ
ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೊಬಳಿ ವ್ಯಾಪ್ತಿಯ ದಾಸನಪುರ ಗ್ರಾಮದ (25) ವರ್ಷ ವಯಸ್ಸಿನ ಪವಿತ್ರ ಎಂಬ ಮಹಿಳೆ ಮನೆಯಲ್ಲಿ ನೇಣಿಗೆ ಶರಣಗಿರುವ ಘಟನೆ ನಡೆದಿದೆ
ಗ್ರಾಮದಲ್ಲಿ ಖಾಸಗಿ ಫೈನಾನ್ಸ್ ಸೇರಿದಂತೆ ಹಲವು ಸ್ವಸಹಾಯ ಸಂಘಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಸಾಲವನ್ನು ಪವಿತ್ರ ದಂಪತಿಗಳು ಮಾಡಿಕೊಂಡಿದ್ದರು ಕಳೆದ ಹದಿನೈದು ದಿನಗಳ ಹಿಂದೆ ಈಕೆಯ ಪತಿ ಆನಂದ್ ಗ್ರಾಮದಿಂದ ನಾಪತೆಯಾಗಿದ್ದು ಇದುವರೆಗೊ ಗ್ರಾಮಕ್ಕೆ ಬಂದಿಲ್ಲ ಬಳಿಕ ಪತ್ನಿ ನೆಲಮಂಗಲದ ತಾಯಿಯ ಮನೆಯನ್ನು ಸೇರಿದ್ದಳು ಗ್ರಾಮದಲ್ಲಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ ಪವಿತ್ರ ಸಾಲ ಕಟ್ಟದಿದ್ದಲ್ಲಿ ಅವರ ಸಾಲದ ಹಣವನ್ನು ಉಳಿದ ಮಹಿಳೆಯರು ಪಾವತಿಸುವಂತೆ ಖಾಸಗಿ ಫೈನಾನ್ಸ್ ಹಾಗೂ ಸಂಘಗದವರು ಒತ್ತಡ ಹೇರಿದ ಕಾರಣ
ಗ್ರಾಮದ ಮಹಿಳೆಯರು ತಾಯಿಮನೆಯಲ್ಲಿದ್ದ ಪವಿತ್ರಳನ್ನು ಬೇಟಿಯಾಗಿ ಖಾಸಗಿ ಫೈನಾನ್ಸ್ ಹಾಗೂ ಸ್ವಸಹಾಯ ಸಂಘದಲ್ಲಿ ಪಡೆದಿರುವ ಸಾಲವನ್ನು ಗ್ರಾಮಕ್ಕೆ ಬಂದು ಮರುಪಾವತಿ ಮಾಡುವಂತೆ ತಿಳಿಸಿದ್ದಾರೆ ಗುರುವಾರ ದಾಸನಪುರ ಗ್ರಾಮಕ್ಕೆ ಬಂದ ಪವಿತ್ರಳಿಗೆ ಖಾಸಗಿ ಫೈನಾನ್ಸ್ ಹಾಗೂ ಸ್ವಸಹಾಯ ಸಂಘದ ಪ್ರತಿನಿಧಿಗಳು ಮನೆಯ ಬಳಿ ಬಂದು ಸಾಲ ಮರು ಪಾವತಿಸುವಂತೆ ಗಲಾಟೆ ಮಾಡಿದ್ದಾರೆ ಇದಾದ ಬಳಿಕ ಪವಿತ್ರ ತನ್ನ ಗಂಡನ ಅಣ್ಣನ ಬಳಿ ಬಂದು ನಮ್ಮ ಭಾಗಕ್ಕೆ ಬರುವ ಭೂಮಿಯನ್ನಾದರು ಕೊಡಿ ಅದನ್ನಾದರು ಮಾರಾಟ ಮಾಡಿ ಸಾಲ ತಿರಿಸುವೆಯೆಂದು ಗೊಗರೆದಿದ್ದಾಳೆ
ಇದಕ್ಕೆ ಸ್ಪಂದಿಸದ ಗಂಡನ ಅಣ್ಣ ಮುಂದಿನ ದಿನಗಳಲ್ಲಿ ಎಲ್ಲರು ಸೇರಿ ಭೂಮಿ ಹಂಚಿಕೆ ಮಾಡಿಕೊಳ್ಳೊಣ ಎಂದಿದ್ದಾರೆ ಈದಾದ ಬಳಿಕ ಮನೆಯ ಬಾಗಿಲನ್ನು ಮುಚ್ಚಿ ಮೂರು ವವರ್ಷದ ಗಂಡು ಮಗುವನ್ನು ಬಿಟ್ಟು ಸಿಲಿಂಗ್ ಫ್ಯಾನ್ ಗೆ ಸೀರೆಯಿಂದ ನೇಣು ಬಿಗಿದುಕೊಂಡ ಸಾವನ್ನಪಿದ್ದಾಳೆ ಇನ್ನೂ ಘಟನೆ ಸಂಬಂಧ ಕುಣಿಗಲ್ ಪೊಲೀಸರು ಸ್ಥಳ ಪರಿಶೀಲನೆ ನಡಿಸಿದ್ದು ಕುಟುಂಬಸ್ಥರ ದೂರು ಇನ್ನೆಲೆ ಏಳು ಖಾಸಗಿ ಫೈನಾನ್ಸ್ ಗಳ ವಿರುದ್ದ ಪ್ರಕರಣ ದಾಖಲಾಗಿದೆ