ಪಟಾಕಿ ಸಿಡಿದು ಸಚಿವ ಕೆ,ಎನ್,ರಾಜಣ್ಣ ಕಣ್ಣಿಗೆ ಗಾಯ ಆಸ್ಪತ್ರೆ ಯಲ್ಲಿ ಚಿಕಿತ್ಸೆ!

Spread the love

ಕುಣಿಗಲ್;- ಪಟಾಕಿ ಸಿಡಿದು ಸಹಕಾರಿ ಸಚಿವ ಕೆ,ಎನ್ ರಾಜಣ್ಣ ಅವರ ಕಣ್ಣಿಗೆ ಗಾಯಗೊಂಡ ಘಟನೆ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ,ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ,ಎನ್ ರಾಜಣ್ಣ ಅವರು ಭಾನುವಾರ ಶಕ್ತಿ ಯೋಜನೆಗೆ ಚಾಲನೆ ನೀಡಲು ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದರು,ಈ ಬಗ್ಗೆ ವಿಷಯ ತಿಳಿದ ಕಾಂಗ್ರೆಸ್ ಮುಖಂಡರು ಹಾಗೂ ಕೆ,ಎನ್,ಆರ್ ಅಭಿಮಾನಿಗಳು,ಕಾಂಗ್ರೆಸ್ ಕಾರ್ಯಕರ್ತರು

ಕುಣಿಗಲ್ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಕೆ,ಎನ್,ರಾಜಣ್ಣ ನವರ ಕಾರನ್ನು ತಡೆದು ಪುಷ್ಪ ಮಾಲೆ‌ ಹಾಕಿ ಅಭಿನಂದಿಸಿದ್ದಾರೆ ಇದೆ ವೇಳೆ ಸಂಭ್ರಮದಿಂದ ಸಮೀಪದಲ್ಲೇ ಪಟಾಕಿ ಹಚ್ಚಿ ಸಿಡಿಸಿದರು ಈ ಸಂದರ್ಭ ಸಚಿವ ರಾಜಣ್ಣ ಧರಿಸಿದ ಕನ್ನಡಕ ತೆಗೆಯುವುದು ಹಾಗೂ ಪಟಾಕಿ ಸಿಡಿಯುವುದು ಒಂದೇ ಸಮಯವಾಗಿತ್ತು,

ಪಟಾಕಿ ಸಿಡಿದು ಸಚಿವ ಕೆ,ಎನ್,ರಾಜಣ್ಣ ಕಣ್ಣಿಗೆ ಗಾಯ ಆಸ್ಪತ್ರೆ ಯಲ್ಲಿ ಚಿಕಿತ್ಸೆ

ಪಟಾಕಿಯ ಕಿಡಿ ನೇರವಾಗಿ ರಾಜಣ್ಣ ನವರ ಬಲ ಕಣ್ಣಿಗೆ ಬಂದು ಸಿಡಿಯಿತು ತಕ್ಷಣ ಸಚಿವರನ್ನು ಪಟ್ಟಣದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯುದ್ದು ನೇತ್ರ ತಜ್ಞ ಡಾ,ರವಿಕುಮಾರ್ ಅವರಿಂದ ತಪಸಣೆ ನಡೆಸಿ ಚಿಕಿತ್ಸೆ ಪಡೆದು,ಬಳಿಕ ಹಾಸನಕ್ಕೆ ತೆರಳಿದ ಘಟನೆ ನಡೆಯಿತು ಏನೆ ಹಾಗಲಿ ಸಂಭ್ರಮಕ್ಕೆ ಸಿಡಿಸುವ ಪಟಾಕಿ ಇನ್ನೊಬ್ಬರ ಪ್ರಾಣಕ್ಕೆ ಕುತ್ತು ತರದಿದ್ದರೆ ಸಾಕು,